ರಾಜ್ ಕುಂದ್ರಾ ಟ್ವೀಟ್ ನ ಒಳಮರ್ಮವೇನು? ನಿಜವಾಗಿಯೂ ಶಿಲ್ಪಾಶೆಟ್ಟಿಯೊಂದಿಗೆ ವಿಚ್ಛೇದನ ಪಡೆದಿದ್ದಾರಾ?


ಪ್ರೋನೋಗ್ರಾಫಿ ವಿಡಿಯೋ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ರಾಜ್ ಕುಂದ್ರಾ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಳಿಕ ಕಾಣಿಸಿಕೊಂಡಿದ್ದು ಕಡಿಮೆಯೇ . ಕಾಣಿಸಿಕೊಂಡರು ಮುಖದ ತುಂಬಾ ಮಾಸ್ಕ್ ಧರಿಸುತ್ತಿದ್ದರು. 



ಇದೀಗ ಚರ್ಚೆಯಾಗುತ್ತಿರುವ ವಿಚಾರ, ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ನಡುವಿನ ವಿಚ್ಛೇದನ ವಿಚಾರ. ರಾಜ್ ಕುಂದ್ರಾ ಅವರು ಮಾಡಿರುವ ಟ್ವೀಟ್ ಒಂದು ಸದ್ಯಕ್ಕೆ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ತಮ್ಮ ಎಕ್ಸ್ ಖಾತೆ ಅಂದರೆ ಟ್ವೀಟರ್ ಖಾತೆಯಲ್ಲಿ ರಾಜ್ ಕುಂದ್ರಾ ನಾವು ಬೇರೆಯಾಗಿದ್ದೇವೆ. ಇದರಿಂದ ಹೊರಬರಲು ಕೊಂಚ ಸಮಯ ಬೇಕು. ದಯವಿಟ್ಟು ಸಹಕರಿಸಿ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದು, ಇದು ಗೊಂದಲಕ್ಕೆ ಕಾರಣವಾಗಿದೆ. 

ಇತ್ತೀಚೆಗಷ್ಟೇ ರಾಜ್ ಕುಂದ್ರಾ ನಟನೆ UT69 ಚಿತ್ರದ ಟ್ರೇಟರ್ ರಿಲೀಸ್ ಆಗಿತ್ತು. ಹೀಗಾಗಿ ಚಿತ್ರದ ಪ್ರಚಾರದ ಗಿಮಿಕ್ ಇದಾಗಿರಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ ಕುಂದ್ರಾ ತಮ್ಮ ಟ್ವೀಟ್ ನಲ್ಲಿ ಎಲ್ಲೂ ಕೂಡ ತಮ್ಮ ಮಡದಿಯೊಂದಿಗೆ ವಿಚ್ಛೇದನ ಪಡೆದುಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿಲ್ಲ. ಬದಲಿಗೆ ನಾವು ಬೇರೆಯಾಗುತ್ತಿದ್ದೇವೆ ಎಂದಷ್ಟೇ ಹೇಳಿದ್ದಾರೆ. ಹೀಗಾಗಿ ಇದೊಂದು ಪ್ರಚಾರತಂತ್ರ ಎಂದು ಹಲವರು ಹೇಳಿಕೊಂಡಿದ್ದಾರೆ.

2021ರಲ್ಲಿ ರಾಜ್ ಕುಂದ್ರಾ ವಿರುದ್ಧ ಪ್ರೋನೋಗ್ರಾಫಿ ವಿಡಿಯೋ ವಿಚಾರವಾಗಿ ಆರೋಪ ಕೇಳಿಬಂದಿತ್ತು. ಹೀಗಾಗಿ ಅವರು 2 ತಿಂಗಳ ಕಾಲ ಜೈಲಿನಲ್ಲಿ ಕಳೆಯುವಂತಾಗಿತ್ತು. ಜೈಲಿನಿಂದ ಹೊರಬಂದ ನಂತರ ರಾಜ್ ಕುಂದ್ರಾ  ಯುಟಿ69 ಚಿತ್ರದಲ್ಲಿ ನಟಿಸಿದ್ದು, ಇತ್ತೀಚೆಗಷ್ಟೇ ಅದರ ಟ್ರೇಲರ್ ಕೂಡ ರಿಲೀಸ್ ಆಗಿತ್ತು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?