ಐಶ್ವರ್ಯ ರೈ ಅವರ ಈ ವಿಷ್ಯ ನಂಗೆ ಹಿಡಿಸುವುದಿಲ್ಲ ಅಂದ್ರು ನಾದಿನಿ ಶ್ವೇತ ಬಚ್ಚನ್

ಇತ್ತೀಚೆಗೆ ಅಮಿತಾಬ್ ಬಚ್ಚನ್ ಅವರ ಹುಟ್ಟುಹಬ್ಬದ ಸಮಯದಲ್ಲಿ ನಟಿ ಐಶ್ವರ್ಯಾ ರೈ ಅವರು ಹಾಕಿದ್ದ ಪೋಸ್ಟ್ ಒಂದು ಗಮನ ಸೆಳೆದಿತ್ತು. 



ಅಷ್ಟೇ ಅಲ್ಲದೆ ಎಡಿಟ್ ಮಾಡಿ ಕೇವಲ ಮಗಳು ಅರಾಧ್ಯ ಮತ್ತು ಅಮಿತಾಬ್ ಇರುವ ಫೋಟೋ ಹಾಕಿದ್ದರಿಂದ ಅತ್ತೆ ಸೊಸೆಯರ ನಡುವಿನ ಸಂಬಂಧ ಸರಿ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಸಾಗಿದ್ದವು. ಚಿತ್ರದಲ್ಲಿ ಅತ್ತೆ ಜಯಬಚ್ಚನ್ ಹಾಗೂ ನಾದಿನಿ ನವ್ಯಾನಂದ ಕೂಡ ಇದ್ದರು. ಆದರೆ ಅದನ್ನು ಕ್ರಾಪ್ ಮಾಡಿದ್ದ  ಐಶ್ವರ್ಯಾ ರೈ, ಅಮತಾಬ್ ಇರುವ ಫೋಟೋವನ್ನು ಮಾತ್ರ ಹಾಕಿದ್ದರು. ಇದರ ನಡುವೆ ಇದೀಗ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಶ್ವೇತಾ ಬಚ್ಚನ್ ಇವರ ಹಳೆ ಸಂದರ್ಶನದ ವಿಡಿಯೋವೊಂದು ವೈರಲ್ ಆಗಿದೆ. 

ನಾದಿನಿಯ ಈ ವಿಚಾರ ನಂಗೆ ಇಷ್ಟ ಇಲ್ಲ ಅಂದಿದ್ರು ಶ್ವೇತಾ..!

ಕಾಫಿ ವಿತ್ ಕರಣ್ ನಲ್ಲಿ ಮಾತನಾಡಿದ್ದ ಶ್ವೇತಾ, ತಮಗೆ ಐಶ್ವರ್ಯಾ ಮೇಲಿನ ಅಸಮಾಧಾನವನ್ನು ಬಹಿರಂಗವಾಗಿ ಹೇಳಿದ್ದರು.  ಕಾರ್ಯಕ್ರಮದಲ್ಲಿ ಕರಣ್, ನೀವು ಯಾವ ಕಾರಣಕ್ಕೆ ನಿಮ್ಮ ಅತ್ತಿಗೆಯನ್ನು ದ್ವೇಷಿಸುತ್ತೀರಾ ಮತ್ತು ಸಹಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆ ಎದುರಾಗಿತ್ತು. ಈ ಸಂದರ್ಭದಲ್ಲಿ ಅಭಿಷೇಕ್ ಬಚ್ಚನ್ ಕೂಡ ಜೊತೆಗಿದ್ದರು. ನಟಿಯ ಬಗ್ಗೆ ಮಾತನಾಡಿದ್ದ ಶ್ವೇತಾ, ಐಶ್ವರ್ಯಾ ಸ್ಟ್ರಾಂಗ್ ವುಮೆನ್, ಅದ್ಬುತ ತಾಯಿ ಎಂದಿದ್ದರು.  ಆಕೆಯ ಸಮಯದ ನಿರ್ವಹಣೆಯನ್ನು ಸಹಿಸಿಕೊಳ್ಳುತ್ತೇನೆ ಎಂದಿದ್ದ ಆಕೆ,  ಕರೆಗಳು ಮತ್ತು ಸಂದೇಶಗಳಿಗೆ ಆಕೆ ಉತ್ತರಿಸದ ಪರಿಯನ್ನು ಯಾವತ್ತು ನಾನು ದ್ವೇಷಿಸುತ್ತೇನೆ ಎಂದಿದ್ದಾರೆ 

ಇದೇ ವೇಳೆ ಸಹೋಧರ ಅಭಿಷೇಕ್ ಬಚ್ಚನ್ ಬಗ್ಗೆ ಮಾತನಾಡಿದ್ದ ಶ್ವೇತಾ, ಅವನು ಒಬ್ಬ ಮಗನಾಗಿ ಮಾತ್ರವಲ್ಲ, ಗಂಡನಾಗಿ ಕೂಡ ತುಂಬಾ ನಿಷ್ಠಾವಂತ ಮತ್ತು ಕುಟುಂಬಕ್ಕೆ ಸಮರ್ಪಿತನಾಗಿರುವ ವ್ಯಕ್ತಿ.ಆತನಲ್ಲಿರುವ ದ್ವೇಷಿಸುವಂತಾಹ ವಿಚಾರ ಎಂದರೆ ನನಗೆ ಎಲ್ಲಾ ತಿಳಿದಿದೆ ಎನ್ನುವ ಆತನ ಮನೋಭಾವ ಎಂದಿದ್ದಾರೆ. ಅವರು ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ತಮ್ಮ ಮಗಳು ನವ್ಯಾ ನಂದಾ ಅವರನ್ನು ಅಭಿನಂದಿಸುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಆದರೆ ಐಶ್ವರ್ಯಾ ಅವರನ್ನು ಟ್ಯಾಗ್ ಮಾಡದೆ ಇರುವುದರಿಂದ ಅಭಿಮಾನಿಗಳು ಅಸಮಾಧಾನಗೊಂಡಿದ್ದರು. ತನ್ನ ಪೋಸ್ಟ್‌ನಲ್ಲಿ, ನವ್ಯಾ ರ‍್ಯಾಂಪ್ ವಾಕ್ ನೋಡಿದ ನಂತರ ತಾನು ಮತ್ತು ಆಕೆಯ ತಾಯಿ ಜಯಾ ಬಚ್ಚನ್ ಹೇಗೆ ಭಾವುಕರಾದರು ಎಂದು ಅವರು ತಿಳಿಸಿದ್ದಾರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?