ಬಾಲಿವುಡ್ ನಲ್ಲಿ ಯಶ್ ಸಂಭಾವಣೆ ಕೇಳಿ ಹುಬ್ಬೇರಿಸಿದ ಸಿನಿಮಂದಿ..?!

 ಕೆಜಿಎಫ್ 2 ನಂತರ ನಟ ಯಶ್ ಅಭಿಮಾನಿಗಳು ಯಶ್ ಮುಂದಿನ ಸಿನಿಮಾ ಬಗ್ಗೆ ಕಾತರದಿಂದ ಕಾಯುತ್ತಲೇ ಇದ್ದಾರೆ. ಬಟ್ ನೋ ಯೂಸ್. ಕಾದು ಕಾದು ಅಭಿಮಾನಿಗಳು ಹೈರಾಣಾಗಿದ್ದಾರೆ ಹೊರತು. ಯಶ್ ಮಾತ್ರ ತಮ್ಮ ಹೊಸ ಸಿನಿಮಾ ಅನೌನ್ಸ್ ಮಾಡುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. 



ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಗೆದ್ದ ಯಶ್ ಹೊಸ ಸಿನಿಮಾ ಬಗ್ಗೆ ಅನೌನ್ಸ್ ಮಾಡದೇ ಇದ್ದರೂ, ಒಂದು ಮೂಲದ ಪ್ರಕಾರ ಯಶ್ ಬಾಲಿವುಡ್ ಗೆ ರಾವಣನಾಗಿ ಪ್ರವೇಶಿಸುತ್ತಿದ್ದಾರೆ ಅನ್ನಲಾಗುತ್ತಿದೆ.  ಬಾಲಿವುಡ್ ನ ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ಅವತರಿಸಲು ಯಶ್ ಮುಂದಾಗಿದ್ದಾರೆ ಅನ್ನಲಾಗುತ್ತಿದೆ. ರಾಮಾಯಣ ಕುರಿತ ಧಾರವಾಹಿಗಳು, ಸಿನಿಮಾಗಳು ಬರುತ್ತಲೇ ಇದೆ. ಆದರೆ ಇದು ಮುಗಿಯದ ಅಧ್ಯಾಯ. ಹೀಗಾಗಿ ಮತ್ತೆ ರಾಮಾಯಣ ಚಿತ್ರ ಮೂಡಿಬರಲಿದೆ. ಸದ್ಯಕ್ಕೆ ಮೂಡಿ ಬರುತ್ತಿರುವ ರಾಮಾಯಣ ಚಿತ್ರ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದ್ದು, ಯಶ್ ಈಗಾಗಲೇ ಕಾಲ್ ಶೀಟ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. 


100 ಕೋಟಿಯ ಸರದಾರ!

ಕೆಜಿಎಫ್ ಸಿನಿಮಾ ಹಿಟ್ ಆದ ಬಳಿಕ ಯಶ್ ಮಾರ್ಕೆಟ್ ವ್ಯಾಲ್ಯೂ ಹೆಚ್ಚಾಗಿದೆ. ರಾಮಾಯಣ ಚಿತ್ರಕ್ಕೆ ಯಶ್ 100 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದ್ದು, ಇವರ ಸಂಭಾವಣೆ ಕೇಳಿ ಹಲವು ಮಂದಿ ಹುಬ್ಬೇರಿಸುತ್ತಿದ್ದಾರೆ.  ಅಂದಹಾಗೆ ರಾಮಾಯಣದ ಕಥೆಯೇ ಹಾಗೆ. ಅಲ್ಲಿ ಕಥೆಗಳು ವಿವಿಧ ಆಯಾಮಗಳನ್ನು ಪಡೆದುಕೊಳ್ಳುತ್ತಲೇ ಇರುತ್ತದೆ. ಇದೀಗ ಮೂಡಿ ಬರಲಿರುವ ರಾಮಾಯಣ ಮೂರು ಭಾಗಗಳಲ್ಲಿ ಪ್ರೇಕ್ಷಕರ ಎದುರು ಬರಲಿದೆಯಂತೆ. ಹೀಗಾಗಿ ಯಶ್ ಕಾಲ್ ಶೀಟ್ ಗೆ ಇಷ್ಟೊಂದು ಡಿಮ್ಯಾಂಡ್ ಮಾಡಿದ್ದಾರಂತೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್ ಕಾಪೂರ್ ರಾಮನ ಪಾತ್ರದಲ್ಲಿ ಹಾಗೂ ಸಾಯಿಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇನೆ ಇರಲಿ ರಾಮಾಯಣದಲ್ಲಿ ಯಶ್ ಮುಳುಗಿದರೆ ಅವರ ಮುಂದಿನ ಸಿನಿಮಾ ಯಾವಾಗ ಮೂಡಿಬರಲಿದೆ ಎಂಬುದು ಹಲವರ ಪ್ರಶ್ನೆ...?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?