ಉದುರುದುರಾಗಿ ಸಬ್ಬಕ್ಕಿ ಉಪ್ಪಿಟ್ಟು ಮಾಡುವುದು ಹೇಗೆ ಗೊತ್ತಾ?

 


ಸಾಬೂದಾನ. ಭಾರತೀಯ ಉಪಹಾರಗಳಲ್ಲಿ, ಪಾಯಾಸದಲ್ಲಿ ಹೆಚ್ಚಾಗಿ ಬಳಸಲ್ಪಡುವ ವಸ್ತು. ಮರಗೆಣಸಿನಿಂದ ತಯಾರಿಸಲ್ಪಡುವ ಈ ಸಾಬೂದಾನ. ಆರೋಗ್ಯದ ದೃಷ್ಟಿಯಿಂದಲೂ ಅತ್ಯುತ್ತಮವಾಗಿರುವಂತಹದ್ದು. 



ಮರಗೆಣಸಿನ ಹಾಲನ್ನು ತೆಗೆದು ಅದನ್ನು ದೊಡ್ಡ ಟ್ಯಾಂಕ್ ನಲ್ಲಿ 8 ಗಂಟೆಗಳ ಕಾಲ ಹಾಗೆ ಬಿಟ್ಟು, ಕೆಳಗಡೆ ಕೂತಿರುವ ಗಟ್ಟಿ ಹಾಲನ್ನು ಬಳಸಿ ಈ ಸಾಬೂದಾನವನ್ನು ತಯಾರಿಸಲಾಗುತ್ತದೆ. ಸಾಬೂದಾನದಲ್ಲಿ ಖಿಚಡಿ, ಸೇರಿದಂತೆ ಆರೋಗ್ಯಕರವಾದ ಭಕ್ಷ್ಯವನ್ನು ತಯಾರಿಸುತ್ತಾರೆ. ಆದರೆ ಸಾಬೂದಾನ ಖಿಚಡಿ ಮಾಡಿದರೆ ಅದು ಅಂಟಾಂಟಾಗಿ ಇರುತ್ತದೆ ಎಂಬುದು ಹಲವರ ಅಭಿಪ್ರಾಯ. ಹಾಗಾದರೆ  ಉದುರುದುರಾಗಿ ಸಾಬೂದಾನ ಖಿಚಡಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ಹೇಳ್ತೀವಿ ನೋಡಿ. 

ಉದುರುದುರಾದ ಖಿಚಡಿ ತಯಾರಿಸುವುದು, ಸಾಬುದಾನವನ್ನು ತೊಳೆಯುವ ಮತ್ತು ನೆನೆಸುವ ಹಂತದಲ್ಲಿರುವ ಪ್ರಮುಖ ಪ್ರಯೋಗ, ಎರಡು ಕಪ್ ಸಾಬೂದಾನವನ್ನು ಮೂರದಿಂದ ನಾಲ್ಕು ಬಾರಿ ಶುದ್ದವಾದ ನೀರಿನಲ್ಲಿ ತೊಳೆದುಕೊಳ್ಳಿ. ಬಳಿಕ ಇದನ್ನು ನಾಲ್ಕು ಗಂಟೆಗಳ ಕಾಲ ಮುಕ್ಕಾಲು ಕಪ್ ನೀರಿನಲ್ಲಿ ನೆನೆಸಿಡಿ. ಈ ರೀತಿ ಮಾಡುವುದರಿಂದ ಸಾಬೂದಾನದಲ್ಲಿರುವ ಅತಿಯಾದ ಪಿಷ್ಟವು ಕಡಿಮೆಯಾಗುತ್ತದೆ ಮತ್ತು ಸಾಬೂದಾನ ಮೃದುವಾಗುತ್ತದೆ.

ಈಗ ರೋಸ್ಟ್ ಮಾಡಿದ ನೆಲಗಡಲೆಯನ್ನು ಪೌಡರ್ ಮಾಡಿಕೊಳ್ಳಿ ಮತ್ತು ಇದನ್ನು ನೆನೆಸಿಟ್ಟ ಸಾಬುದಾನದೊಂದಿಗೆ ಮಿಕ್ಸ್ ಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ಸಾಬೂದಾನದ ಹರಳುಗಳು, ನೆಲಗಡಲೆಯ ಪೌಡರ್ ನಿಂದ ಕವರ್ ಆಗುತ್ತದೆ . ರಾಕ್ ಸಾಲ್ಡ್ ರುಚಿಗೆ ತಕ್ಕಷ್ಟು ಹಾಕಿ ಮಿಕ್ಸ್ ಮಾಡಿಕೊಳ್ಳಿ.

ಬಳಿಕ ಒಂದು ಪ್ಯಾನ್ ನಲ್ಲಿ ಎರಡು ಟೀ ಸ್ಪೂನ್ ತುಪ್ಪವನ್ನು ಬಿಸಿ ಮಾಡಿಕೊಳ್ಳಿ. ಕೊಂಚ ಜೀರಿಗೆ , ಕೊಂಚ ಹಸಿರು ಮೆಣಸು , ಬೇವಿನ ಎಲೆಯನ್ನು ಸೇರಿಸಿ ಒಗ್ಗರಣೆ ಹಾಕಿಕೊಳ್ಳಿ. ಇದೀಗ ಮೊದಲೆ ಬೇಯಿಸಿಟ್ಟುಕೊಂಡ ಆಲೂಗಡ್ಡೆಯನ್ನು ಸೇರಿಸಿ ಹುರಿಯಿರಿ. ಆಲೂಗಡ್ಡೆ ಕ್ರಿಸ್ಪಿ ಆದ ಬಳಿಕ ನೀವು ಮೊದಲೇ ತಯಾರಿಸಿಟ್ಟುಕೊಂಡಿರುವ ಸಾಬೂದಾನವನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಿ. ನಾಲ್ಕರಿಂದ ಐದು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಸಾಬೂದಾನವನ್ನು ಹುರಿಯಿರಿ. ಬಳಿಕ ಕೊತ್ತಂಬರಿ ಸೊಪ್ಪು ಮತ್ತು ಲಿಂಬೆ ರಸ ಬೆರೆಸಿ ಸವಿಯಲು ಕೊಡಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?