ಚಿತ್ರನಟ ಅಬ್ಬಾಸ್ ದಿವಾಳಿಯಾಗಲು ಕಾರಣವೇನು ಗೊತ್ತಾ?
ಒಂದೊಮ್ಮೆ ಐಶ್ವರ್ಯಾ ರೈ, ತಬು ಜೊತೆ ರೋಮ್ಯಾನ್ಸ್ ಮಾಡಿದ್ದ ಈ ಹಿರೋ ಇದೀಗ ದುಬೈನಲ್ಲಿ ಕಾರ್ ಡ್ರೈವರ್.
ಈ ಅದೃಷ್ಟ ಅನ್ನೋದೆ ಹಾಗೆ. ಯಾವಾಗ, ಎಲ್ಲಿ, ಯಾರ ಕೈ ಹಿಡಿಯುತ್ತದೆ, ಮತ್ತು ಕೈ ಕೊಡುತ್ತದೆ ಎಂಬುದನ್ನು ಹೇಳಲು ಅಸಾಧ್ಯ. ಕೆಲವರು ಹಿರೋದಿಂದ ಜಿರೋ ಆದರೆ ಮತ್ತೆ ಕೆಲವರು ಜಿರೋದಿಂದ ರಾತ್ರಿ ಬೆಳಗಾಗುವುದರೊಳಗಾಗಿ ಹಿರೋ ಆದ ಕಥೆಯೂ ಇದೆ. ಇದೀಗ ನಾವು ಹೇಳಲು ಹೊರಟಿರುವುದು ಹಿರೋದಿಂದ ಜಿರೋ ಆದ ತಮಿಳಿನ ಖ್ಯಾತ ನಟನೊಬ್ಬನ ಕಥೆಯನ್ನು. ಅಬ್ಬಾಸ್. ಚಿಗುರು ಮೀಸೆಯ ಈ ಯುವಕ 90ರ ದಶಕದಲ್ಲಿ ಯುವತಿಯರ ನಿದ್ದೆ ಕದ್ದ ಹಿರೋ.
90 ರ ದಶಕದಲ್ಲಿ, ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ಹೆಚ್ಚು ವೈವಿಧ್ಯಮಯ ಸಿನಿಮಾಗಳನ್ನು ಪ್ರಯೋಗಿಸುತ್ತಿದ್ದಾಗ, ತಮಿಳು ಚಿತ್ರರಂಗವು ತನ್ನ ಮುಂದಿನ ಸೂಪರ್‌ಸ್ಟಾರ್‌ಗಾಗಿ ಹುಡುಕಾಡುತ್ತಿತ್ತು.. ಅರವಿಂದ್ ಸ್ವಾಮಿಯಿಂದ ಹಿಡಿದು ದಳಪತಿ ವಿಜಯ್ ವರೆಗೆ ಅನೇಕ ಯುವ ನಟರು ತಮ್ಮ ತಮ್ಮ ಸ್ಥಾನ ಉಳಿಸಿಕೊಳ್ಳಲು ಪೈಪೋಟಿಗಿಳಿದಿದ್ದಾಗ ಮುಂಚೂಣಿಯಲ್ಲಿ ಕೇಳಿಬಂದ ಹೆಸರು ಅಬ್ಬಾಸ್. ಈತನ ಕೈಯಲ್ಲಿ ಹಲವು ಯಶಸ್ವಿ ಚಲನಚಿತ್ರಗಳು, ದೊಡ್ಡ ನಿರ್ದೇಶಕರು ಮತ್ತು ದೊಡ್ಡ ಅಭಿಮಾನಿ ಬಳಗವೇ ಇತ್ತು. ಅದೆಷ್ಟೋ ಬಾರಿ ಇವರೇ ಚಿತ್ರರಂಗದ ಮುಂದಿನ ಉತ್ತರಾಧಿಕಾರಿ ಎಂದೇ ಗಾಸಿಪ್ ಗಳು ಹರಡಿತ್ತು. ದುರದೃಷ್ಟ ಎನ್ನಬೇಕೋ ಏನೋ ಗೊತ್ತಿಲ್ಲ. 30 ರ ಹರೆಯ ತುಂಬುದರೊಳಗಾಗಿಯೇ ಈ ನಂಬರ್ ಓನ್ ನಾಯಕ, ಸೈಡ್ ಲೈನ್ ಆಗಿಬಿಟ್ಟ. ದೀವಾಳಿಯಾಗಿ ಚಿತ್ರರಂಗವನ್ನೇ ಬಿಡಬೇಕಾದ ಅನಿವಾರ್ಯತೆ ಎದುರಾಯಿತು. ಜೀವನ ನಡೆಸುವುದು ದುಸ್ತರವಾದಾಗ ಈ ನಟ ಆಯ್ದುಕೊಂಡಿದ್ದು, ಟ್ಯಾಕ್ಸಿ ಡ್ರೈವಿಂಗ್. , ಶೌಚಾಲಯ ಕ್ಲಿನಿಂಗ್ ನಂತಹ ಕೆಲಸವನ್ನು,
ಕಾದಲ್ ದೇಶಂ ಚಿತ್ರದ ತಾರೆ ಅಬ್ಬಾಸ್ ನೆನಪಿದೆಯೇ?
1975 ರಲ್ಲಿ ಜನಿಸಿದ ಅಬ್ಬಾಸ್ ಹದಿಹರೆಯದವರಾಗಿ ಬೆಂಗಳೂರಿನಲ್ಲಿ ಮಾಡೆಲಿಂಗ್ ಕಾರ್ಯಯೋಜನೆಗಳನ್ನು ಕೈಗೊಳ್ಳುವ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದರು. 1996 ರ ಕಾದಲ್ ದೇಶಂ ಚಿತ್ರಕ್ಕೆ ಹಿರೋ ಆಗಿ ಆಯ್ಕೆ ಆದರು. ಚಿತ್ರದ ಯಶಸ್ಸು ಅವರನ್ನು ರಾತ್ರೋರಾತ್ರಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿತು. ಅಲ್ಲಿಂದ ಮುಂದೆ ಅವರು ನಟಿಸಿದ ಹಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸುವಲ್ಲಿ ಸೋತುಹೋದರು. ಅಬ್ಬಾಸ್ ರಜನಿಕಾಂತ್-ನಟನೆಯ ಪಡಯಪ್ಪದಲ್ಲಿ ವಿಲನ್ ಆಗಿ ಕಾಣಿಸಿಕೊಂಡರು ಮತ್ತು ಕಮಲ್ ಹಾಸನ್ ಅವರ ಹೇ ರಾಮ್ ನಲ್ಲಿ ಪೋಷಕ ಪಾತ್ರವನ್ನು ಮಾಡಿದರು. ನಂತರ ಅವರು ಐಶ್ವರ್ಯಾ ರೈ, ಅಜಿತ್ ಮತ್ತು ಟಬು ಅವರೊಂದಿಗೆ ಕಂಡುಕೊಂಡೇನ್ ಕಂಡುಕೊಂಡೇನ್‌ನಲ್ಲಿ ಕೆಲಸ ಮಾಡಿದರು, ಅದು ಅವರ ವೃತ್ತಿಜೀವನದಲ್ಲಿ ಮತ್ತೆ ಉತ್ತಮ ಆರಂಭವನ್ನು ಕಂಡುಕೊಳ್ಳುವಂತೆ ಮಾಡಿತು. ಮಿನ್ನಲೆ, ಆನಂದಂ, ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದರು.
ಅಬ್ಬಾಸ್ ಚಿತ್ರರಂಗದಲ್ಲಿ ಸೋಲು ಕಾಣಲು ಕಾರಣವೇನು?
2002 ರಲ್ಲಿ, ನಿರ್ಮಾಪರು ಅಬ್ಬಾಸ್ ಅವರನ್ನು ವೃತ್ತಿಜೀವನದ ಉನ್ನತ ಮಟ್ಟಕ್ಕೆ ಕೊಂಡೊಯ್ಯದರು. ಆದರೆ ನಂತರ ಎಲ್ಲವು ಅಲ್ಲಿಂದ ಕೆಳಗಿಳಿಯಿತು. 2000 ರ ದಶಕದ ಮಧ್ಯಭಾಗದಲ್ಲಿ, ಅಬ್ಬಾಸ್ ಅವರನ್ನು ತಮಿಳು ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ತಳ್ಳಲಾಯಿತು. 2014 ರ ನಂತರ, ಅವರು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಬೇಕಾಯಿತು. ಚಿತ್ರರಂಗದಲ್ಲಿ ತಮಗೆ ಬೇಡಿಕೆ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ಅಬ್ಬಾಸ್ ನಟನೆ ತೊರೆದು ನ್ಯೂಜಿಲೆಂಡ್ ಗೆ ತೆರಳಿದರು. ಕೆಲವು ಮೂಲಗಳ ಪ್ರಕಾರ, ಅಬ್ಬಾಸ್ ಅವರ ಕೆಟ್ಟ ಹಣಕಾಸಿನ ನಿರ್ಧಾರಗಳಿಂದಾಗಿ ಅಬ್ಬಾಸ್ ದಿವಾಳಿಯಂಚಿಗೆ ಬಂದರು ಎಂದು ವರದಿ ಮಾಡಿವೆ. ವಿದೇಶಕ್ಕೆ ತೆರಳಿದ ಅಬ್ಬಾಸ್ ಅವರು ಜೀವನ ನಡೆಸುವ ಸಲುವಾಗಿ ಮೆಕ್ಯಾನಿಕ್ ಮತ್ತು ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಿದರೂ, ಮತ್ತೆ ಕೆಲವೊಮ್ಮೆ ಶೌಚಾಲಯಗಳನ್ನು ತೊಳೆಯುವಂತಹ ಕೆಲಸವನ್ನು ಮಾಡಬೇಕಾಯಿತು ಎಂದು ವರದಿಗಳುತಿಳಿಸಿವೆ.
ಬಿಗ್ ಬಾಸ್ ತಮಿಳು 7 ಆವೃತ್ತಿಯ್ಲಿ ಅಬ್ಬಾಸ್ ?
ತಮಿಳಿನ ಬಿಗ್ ಬಾಸ್ ಮುಂಬರುವ ಸೀಸನ್ ಅನ್ನು ಇತ್ತೀಚೆಗೆ ಘೋಷಿಸಲಾಗಿದ್ದು, ಕಮಲ್ ಹಾಸನ್ ಹೋಸ್ಟ್ ಮಾಡುವ ಈ ಕಾರ್ಯಕ್ರಮದಲ್ಲಿ ಅಬ್ಬಾಸ್ ಪಾಲ್ಗೊಳ್ಳಲಿದ್ದಾರೆ ಎಂಬ ವಂದತಿಗಳು ಕೇಳಿಬಂದಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ