ಕಾಫಿ ವಿತ್ ಕರಣ್ : 2014ರ ಆ ಒಂದು ಭಯಾನಕ ಘಟನೆಯನ್ನು ನೆನೆದ ದೀಪಿಕಾ- ರಣ್ ವೀರ್.

 ನಟಿ ದೀಪಿಕಾ ಪಡುಕೋಣೆ ಹಾಗೂ ರಣ್ ವೀರ್ ಕಾಪೂರ್ ಬಾಲಿವುಡ್ ನ ಮೋಸ್ಟ್ ಲವ್ವೆಬಲ್ ಕಪಲ್ಸ್ ಎಂಬುದರಲ್ಲಿ ಎರಡು ಮಾತಿಲ್ಲ. ಚಾನ್ಸ್ ಸಿಕ್ಕಲೆಲ್ಲಾ ರಣ್ ವೀರ್ ತನ್ನ ಮಡದಿಯನ್ನು ಹೊಗಳುತ್ತಾರೆ. ಬಹಿರಂಗವಾಗಿಯೇ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಆರಂಭದ ದಿನಗಳಲ್ಲಿ ರಣ್ ವೀರ್ ಒಂದು ದೊಡ್ಡ ಬ್ರೇಕ್ ಗಾಗಿ ಸಾಕಷ್ಟು


ಹೆಣಗಾಡಿದ್ದನ್ನು ಈ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅಂತಹ ಸಂದರ್ಭಧಲ್ಲೇ ದೀಪಿಕಾ ಹಾಗೂ ರಣ್ ವೀರ್ ನಡುವೆ ಸ್ನೇಹವಾಗುತ್ತದೆ. ಆದರೆ ಆ  ಸಮಯದಲ್ಲಿ ದೀಪಿಕಾ ಕೂಡ ಅಷ್ಟೇನೂ ದೊಡ್ಡ ಹಿಟ್ ನೀಡುತ್ತಿದ್ದ ಸಮಯವಲ್ಲ. ಕೊಂಚ ಪ್ಲಾಪ್ ಸಿನಿಮಾ ಮತ್ತು ವೈಯಕ್ತಿಕ ಬದುಕಿನ ಪ್ರೀತಿಯ ವೈಫಲ್ಯತೆಯಿಂದ ನೊಂದುಕೊಂಡಿದ್ದ ಜೀವವದು. ಇದೇ ಸಂದರ್ಭದಲ್ಲಿ ಅವರಿಗೆ ಜೀವವಾಯುವಾಗಿದ್ದು ರಣ್ ವೀರ್ ಕೇರಿಂಗ್. 


ಕಾಫಿ ವಿತ್ ಕರಣ್ ಶೋ ದಲ್ಲಿ ಮದುವೆಯಾಗಿ ಕೆಲವರ್ಷಗಳ ನಂತರ ಇದೇ ಮೊದಲ ಬಾರಿಗೆ ದಂಪತಿಗಳಿಬ್ಬರು ಭಾಗವಹಿಸಿ ತಮ್ಮ ಜರ್ನಿಯ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಇಬ್ಬರು ಕೂಡ 2014ರ ಆ ಒಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಒಂದು ದಿನ ಕರೆ ಮಾಡಿ, ನನಗೇನೋ ಅಗುತ್ತಿದೆ. ಬ್ಯಾಕ್ ಔಟ್ ಆಗುತ್ತಿದೆ. ಏನೇನು ತೋಚುತ್ತಿಲ್ಲ. ನಿನಗೆ ನನ್ನ ಮನೆ ಬಳಿ ಬರಲು ಸಾಧ್ಯವೇ ಎಂದಿದ್ದರು. ಆಗ ನಾನು ಶೂಟಿಂಗ್ ನಲ್ಲಿದ್ದೆ. ದೀಪಿಕಾ ಆ ರೀತಿ ಹೇಳುತ್ತಿದ್ದಂತೆ ನಾನು ಕರೆಯನ್ನು ಕಟ್ ಮಾಡಿ ನನ್ನ ಮೋಟರ್ ಬೈಕ್ ನಲ್ಲಿ ಸೀದಾ ಆಕೆಯ ಮನೆಗೆ ಹೋದೆ. ಹೋಗಿ ನೋಡಿದಾಗ ನನಗೆ ಏನೋ ಎಲ್ಲವೂ ಸರಿ ಇಲ್ಲ  ಅನಿಸಲು ಶುರುವಾಯಿತು.  ಆಕೆ ನನ್ನನ್ನೇ ನೋಡುತ್ತಿದ್ದರೂ ಆಕೆ ನನ್ನ ನೋಡುತ್ತಿಲ್ಲ. ಯಾವುದೋ ಶೂನ್ಯದೊಂದಿಗೆ ಇರುವಂತೆ ಭಾಸವಾಯಿತು. 



ಮತ್ತೊಂದು ದಿನ ನಾವಿಬ್ಬರು ಉಪಹಾರಕ್ಕೆಂದು ಹೊಟೇಲ್ ಗೆ ಹೋಗಿದ್ದೇವು. ಈ ಸಂದರ್ಭದಲ್ಲಿ ಆಕೆ ಸಂಪೂರ್ಣ ಭಾವನಾತ್ಮಕವಾಗಿದ್ದಳು. ಬರೀ ಅಳು ಅಳು. ಉತ್ತರ ಮಾತ್ರ ಇಲ್ಲ. ಆಕೆಯ ಕಣ್ಣಿಂದ ಒಂದೇ ಸಮನೆ ನೀರು ಜಾರುತ್ತಿತ್ತು. ನಾನು ಏನು ಹೇಳಬೇಕೋ ತಿಳಿಯದಾದೆ. ನಿಜ ಹೇಳಬೇಕು ಅಂದ್ರೆ ನಾನು ಅಸಹಾಯಕನಾದೆ. ನನಗೆ ಏನು ಮಾಡಬೇಕು. ಹೇಗೆ ಸಮಾಧಾನ ಮಾಡಬೇಕು ಎಂದೇ ತೋಚುತ್ತಿರಲಿಲ್ಲ.  ನಾನು ಸೀದಾ ಆಕೆಯ ಹತ್ತಿರ ಹೋಗಿ, ಏನಾಯಿತು ಮಗು, ನಿನಗಾಗಿ ನಾನು ಏನು ಮಾಡಬೇಕು ಹೇಳು ಎಂದಿದ್ದೆ.  

ಪರಿಸ್ಥಿತಿ ಯಾಕೋ ಸರಿ ಇಲ್ಲ ಎನಿಸಿದಾಗ ನಾನು ಸೀದಾ ಆಕೆಯ ಪೋಷಕರಿಗೆ ಕರೆ ಮಾಡಿ ಬೆಂಗಳೂರಿನಿಂದ ಮುಂಬೈಗೆ ಬರಲು ತಿಳಿಸಿದೆ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ದೀಪಿಕಾ, ನನ್ನ ಆ ಪರಿಸ್ಥಿತಿಗಳಲ್ಲಿ ಆತ ನನಗೊಂದು ಸೇಫ್ ಪ್ಲೇಸ್ ಕ್ರಿಯೇಟ್ ಮಾಡಿದ್ದ ನೋಡಿ. ಅದೇ ನನಗೆ ಆತನ ಮೇಲೆ ಪ್ರೀತಿ ಹುಟ್ಟುವಂತೆ ಮಾಡಿತ್ತು. ನನ್ನ ಖಿನ್ನತೆಯ ಸಂದರ್ಭದಲ್ಲಿ ಆತ ಮಾಡಿದ ಸಹಾಯದಿಂದಲೇ ನಾನು ಎಲ್ಲಾ ಗೊಂದಲಗಳಿಂದ ಹೊರಬಂದೆ ಎಂದಿದ್ದಾರೆ. 

ಅಂದಹಾಗೆ ದೀಪಿಕಾ ಇಂದಿಗಾ ಮೆಡಿಕೇಷನ್ ನಲ್ಲಿದ್ದಾರಂತೆ. ಮತ್ತೆ ಆ ಪರಿಸ್ಥಿತಿಗೆ ಹೋಗದಂತೆ ನಾನು ಈಗಲೂ ಜೌಷಧಿಯನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ ದೀಪಿಕಾ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?