ದರ್ಶನ್ ಗೆ ಆಕ್ಷನ್ ಕಟ್ ಹೇಳಿದ ಯೋಗರಾಜ್ ಭಟ್?

ಯೋಗರಾಜ್‌ ಭಟ್ ಎರಡೆರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು 'ಗರಡಿ'. ಇನ್ನೊಂದು ರಾಕ್‌ಲೈನ್‌ ವೆಂಕಟೇಶ್ ನಿರ್ಮಾಣದ 'ಕರಟಕ ದಮನಕ. 



ಗರಡಿ ಚಿತ್ರ ಗಾಳಿಪಟ 2' ಬಿಡುಗಡೆಗೂ ಮುನ್ನವೇ ಅನೌನ್ಸ್ ಮಾಡಿದ್ದ ಸಿನಿಮಾ . ವಿಭಿನ್ನ ಶೈಲಿಯಲ್ಲಿ ಈ ಬಾರಿ ಅಖಾಡಕ್ಕೆ ಧುಮುಕಿರುವ ಭಟ್ಟರು, ಕುಸ್ತಿ ಅಧರಿತ ಚಿತ್ರಕ್ಕೆ ಕೈ ಹಾಕಿದ್ದಾರೆ. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಯಶಸ್ ಸೂರ್ಯ ನಟಿಸಿದರೆ ಅವರಿಗೆ ಬೆನ್ನೆಲುಬಾಗಿ ನಿಂಂದಿರೋದು ನಮ್ಮ ಚಾಲೆಂಜಿಗ್ ಸ್ಟಾರ್ ದರ್ಶನ್.

ಚಾಲೆಂಜಿಂಗ್ ಸ್ಟಾರ್ ಬಟ್ಟರ ಸಿನಿಮಾದಲ್ಲಿ ನಟಿಸಿರೋದ್ರಿಂದ ನಿರೀಕ್ಷೆ ಹೆಚ್ಚಿದೆ.  ಭಟ್ಟರ ಚಿತ್ರದಲ್ಲಿ ದರ್ಶನ್ ಯಾವ ಪಾತ್ರವನ್ನು ನಿಭಾಯಿಸಿದ್ದಾರೆ ಎಂಬುದು ಸದ್ಯದ ಕುತೂಹಲ. 

ಸಾಮಾನ್ಯವಾಗಿ ಬಟ್ಟರ ಸಿನಿಮಾ ಅಂದರೆ ನೆನಪಾಗೋದು, ಡೈಲಾಗ್ ಗಳು, ಜೋಕ್ ಗಳು, ನೈಜ ಜೀವನದ ಸನ್ನಿವೇಶಗಳು. ಆದರೆ ಇದೇ ಮೊದಲ ಬಾರಿಗೆ ಭಟ್ಟರು ಕೂಡ ವಿಭಿನ್ನ ಶೈಲಿಯ ಸಿನಿಮಾ ಮಾಡೋಕೆ ಹೊರಟಿದ್ದಾರೆ. . ಹೀಗಾಗಿ 'ಗರಡಿ' ಮಾಸ್ ಸಬ್ಡೆಕ್ಟ್ ಇರೋ ಸಿನಿಮಾ.



 ಚಾಲೆಂಜಿಂಗ್ ಸ್ಟಾರ್ ಇದೇ ಮೊದಲ ಬಾರಿಗೆ ಭಟ್ಟರ ನಿರ್ದೇಶನದಲ್ಲಿ ನಟಿಸಿರೋದ್ರಿಂದ ಸಿನಿ ಪ್ರಿಯರ ಉತ್ಸಾಹ ಇಮ್ಮಡಿಗೊಂಡಿದೆ. ಇದೀಗ 'ಗರಡಿ' ಸಿನಿಮಾದಲ್ಲಿ ದರ್ಶನ್ ಹೇಗೆ ಕಾಣಿಸಬಹುದು ಅನ್ನೋದಕ್ಕೆ ಎರಡು ಫೋಟೊಗಳು ಅಭಿಮಾನಿಗಳ ಕೈ ಸೇರಿವೆ. ಅದರಲ್ಲೂ ದರ್ಶನ್ ಮಾಸ್ ಅವತಾರದಲ್ಲಿಯೇ ಕಾಣಿಸುತ್ತಾರೆ. ಕಪ್ಪು ಶರ್ಟ್, ಖಾಕಿ ಪ್ಯಾಂಟ್ ಹಾಕಿ ಕೆಂಪು ಮಣ್ಣು ಹಿಡಿದು ಅಖಾಡಕ್ಕೆ ಇಳಿಯಲು ಸಜ್ಜಾಗಿರೋ ದರ್ಶನ್ ಲುಕ್‌ಗಳು ದರ್ಶನ್ ಫ್ಯಾನ್ಸ್‌ಗೆ ಸಖತ್ ಕಿಕ್ ಕೊಡುತ್ತಿವೆ.

ದರ್ಶನ್ ತಮ್ಮ ಆತ್ಮೀಯರಿಗಾಗಿ ಆಗಾಗ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಇದೆ. 'ಗರಡಿ' ಸಿನಿಮಾದಲ್ಲಿ ದರ್ಶನ್‌ರದ್ದು ಅತಿಥಿ ಪಾತ್ರವೇ ಆಗಿದ್ದರೂ, ಹೆಚ್ಚು ಹೊತ್ತು ತೆರೆಮೇಲೆ ಇರುತ್ತಾರೆ. ಸುಮಾರು 13 ನಿಮಿಷಗಳ ಕಾಲ ಕಾಣಿಸಿಕೊಳ್ಳುತ್ತಾರೆ ಅನ್ನೋ ಮಾತಿದೆ. ಯಶಸ್ ಸೂರ್ಯನ ಅಣ್ಣನಾಗಿ ಕುಸ್ತಿ ಅಖಾಡದಲ್ಲಿ ದರ್ಶನ್ ಅಬ್ಬರಿಸಲಿದ್ದಾರೆಂತೆ

'ಗರಡಿ' ಸಿನಿಮಾದ ಎಲ್ಲಾ ಕೆಲಸವೂ ಬಹುತೇಕ ಮುಗಿದಿದ್ದು, ನವೆಂಬರ್ 10ಕ್ಕೆ ಚಿತ್ರ ತೆರೆಗೆ ಅಪ್ಪಳಿಸಲಿದೆ ಎನ್ನಲಾಗುತ್ತಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?