ರಾವಣನನಾದ ನಟ ಯಶ್...

ರಾವಣನಾಗಿ ಅಬ್ಬರಿಸಲು ರೆಡಿಯಾದ ಯಶ್...



ಭಾರತೀಯ ಪುರಾಣ ಕಥೆಗಳು ಎಷ್ಟು ಕೇಳಿದರೂ , ನೋಡಿದರೂ ಬೋರ್ ಅಗೋದೆ ಇಲ್ಲ. ಅದೆಷ್ಟು ಬಾರಿ ಓದಿದರೂ, ತೆರೆ ಮೇಲೆ ನೋಡಿದರೂ ಮತ್ತೆ ಮತ್ತೆ ನಾವು ರಾಮಾಯಣ ಮಹಾಭಾರತವನ್ನು ನೋಡುತ್ತಲೇ ಇರುತ್ತೇವೆ. ಇದು ಪೌರಾಣಿಕ ಕಥೆಗಿರುವ ಗತ್ತು. ಇರಲಿ ಇದೀಗ ಬಾಲಿವುಡ್ ನಲ್ಲಿ ರಾಮಾಯಣ ಎಂಬ ಚಿತ್ರವೊಂದು ಸಿದ್ದಗೊಳ್ಳುತ್ತಿದ್ದು, ಇದರಲ್ಲಿ ಕನ್ನಡದ ಯಶ್ ಕೂಡ ಬಣ್ಣ ಹಚ್ಚುತ್ತಿದ್ದಾರೆ ಎಂಬುದು ಕುತೂಹಲ. 

ಇದುವರೆಗೂ ಹಿರೋ ಆಗಿ ಮಿಂಚುತ್ತಿದ್ದ ಯಶ್ ಈ ಬಾರಿ ರಾಮಾಯಣದ ಮೂಲಕ ವಿಲನ್ ಆಗಲಿದ್ದಾರೆ. ಅಂದರೆ ಯಶ್ ರಾವಣನ ಪಾತ್ರದಲ್ಲಿ ಮಿಂಚಲಿದ್ದಾರಂತೆ.  

ಎಲ್ಲವೂ ಅಂದುಕೊಂಡಂತೆ ನಡೆದರೆ 2024ರ ಆರಂಭದಲ್ಲೇ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಈಗಾಗಲೇ ಚಿತ್ರ ಚಿತ್ರೀಕರಣಕ್ಕಾಗಿ ಯಶ್ 15 ದಿನಗಳ ಕಾಲ್ ಶೀಟ್ ಕೂಡ ನೀಡಿದ್ದಾರಂತೆ. 

ಸಿನಿಮಾದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ, ರಣಬೀರ್ ಕಾಪೂರ್ ಕೂಡ ಕಾಣಿಸಿಕೊಳ್ಳಲಿದ್ದಾರೆ.  ಇದುವರೆಗೆ ರಾಖಿಬಾಯ್ ಆಗಿ ಅಬ್ಬರಿಸಿದ ಯಶ್ ಇನ್ನೂ ರಾವಣನ ಅವತಾರದಲ್ಲಿ ಹೇಗೆ ಪ್ರೇಕ್ಷಕರನ್ನು ಮೋಡಿ ಮಾಡುತ್ತಾರೋ ಕಾದು ನೋಡಬೇಕಿದೆ. ಚಿತ್ರಕ್ಕೆ ಆಸ್ಕರ್ ವಿನ್ನಿಂಗ್ ಕಂಪನಿಯಾದ ಡಿಎನ್ ಇಜಿ ವಿಎಫ್ ಎಕ್ಸ್ ಪ್ಲೇಟ್ ಗಳನ್ನು ಸಿದ್ದಪಡಿಸಲಿದೆ. ಹೀಗಾಗಿ ಚಿತ್ರ ಪ್ರೇಮಿಗಳಿಗೆ ಇದು ಹೊಸ ಅನುಭವ ನೀಡುವುದು ಸುಳ್ಳಲ್ಲಾ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?