ಚಿತ್ರ ವಿಮರ್ಶೆ. ಹೇಗಿದೆ ಲಿಯೋ ಸಿನಿಮಾ..?
ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಲಿಯೋ' ಸಿನಿಮಾ ತೆರೆಗಪ್ಪಳಿಸಿದೆ. ಸಿನಿಮಾ ಹೇಗಿರುತ್ತೆ? ಅನ್ನೋ ನಿರೀಕ್ಷೆಯೊಂದಿಗೆ ಸಿನಿಮಾ ಥಿಯೇಟರ್ ಗೆ ಹೋದವರಲ್ಲಿ ಕೆಲವರು ನಿರಾಸೆ ವ್ಯಕ್ತಪಡಿಸಿದರೆ ಮತ್ತೆ ಕೆಲವರದ್ದು ವ್ಹಾ ಎನ್ನುವ ಪ್ರತಿಕ್ರಿಯೆ.
ಅದೇನೆ ಇರ್ಲಿ, ಭಾರಿ ನಿರೀಕ್ಷೆ ಹುಟ್ಟಿಸಿದ್ದ ಲಿಯೋ ಸಿನಿಮಾದ ಚಿತ್ರಕಥೆಯನ್ನು ನೋಡಲು ಹೋದರೆ, ಚಿತ್ರದಲ್ಲಿ ವಿಜಯ್ ಪಾರ್ಥಿಅಲಿಯಾಸ್ ಪಾರ್ಥಿಬನ್ ಆಗಿ ನಟಿಸಿದ್ದು, ಅವರ ಪತ್ನಿಯಾಗಿ ತ್ರಿಶಾ ನಟಿಸಿದ್ದಾರೆ. ಪಾರ್ಥಿಬನ್ ಹಿಮಾಚಲ ಪ್ರದೇಶದಲ್ಲಿ ಕಾಫಿ ಶಾಪ್ ನಡೆಸುತ್ತಿರುತ್ತಾರೆ. ಇವರಿಗೆಇಬ್ಬರು ಮಕ್ಕಳಿದ್ದು ಸುಖೀ ಸಂಸಾರ ನಡೆಸುತ್ತಿರುತ್ತಾರೆ.
ಒಂದು ದಿನ ಪಾರ್ಥಿಯ ಮೇಲೆ ಕ್ರೂರಿ ಗ್ಯಾಂಗ್ ಸ್ಟರ್ ಆಂಟೋನಿ ದಾಸ್ ಮತ್ತು ಹೆರಾಲ್ಡ್ ದಾಸ್ ದಾಳಿ ಮಾಡುತ್ತಿರುತ್ತಾರೆ. ಇಲ್ಲಿ ಆಂಟೋನಿಯಾಗಿ ಸಂಜಯ್ ದತ್ ನಟಿಸಿದರೆ, ಹೆರಾಲ್ಡ್ ಆಗಿ ಅರ್ಜುನ್ ಸರ್ಜಾ ನಟಿಸಿದ್ದಾರೆ. ಆಂಟೋನಿ ಮಗ ಲಿಯೋ ಎಂದು ಭಾವಿಸಿ ಈ ದಾಳಿ ನಡೆಯುತ್ತದೆ. ಪಾರ್ಥಿ ಈ ಗಂಡಾಂತರಿಂದ ಹೇಗೆ ಪಾರಾಗುತ್ತಾರೆ ಎಂಬುದು ಚಿತ್ರಕಥೆ. ಅಂದಹಾಗೆ ಚಿತ್ರದಲ್ಲಿ ಪಾರ್ಥಿಬನ್ ಹಾಗೂ ಲಿಯೋ ದಾಸ್ ಒಬ್ಬರೇನಾ ಅಥವ ಬೇರೆನಾ ಅನ್ನೋದು ತಿಳಿಬೇಕು ಅಂದರೆ ಸಿನಿಮಾ ನೋಡಬೇಕು.
ಕಾಂಟ್ರಾಕ್ಟ್ ಕಿಲ್ಲಿಂಗ್ ಎಪಿಸೋಡ್ ಮೂಲಕ ಚಿತ್ರ ಆರಂಭವಾಗುತ್ತದೆ. ವಿಜಯ್ ಇಂಟ್ರಡಕ್ಷನ್ ಹೈನಾ ಜೊತೆಗಿನ ಫೈಟ್ ನೊಂದಿಗೆ ಆರಂಭವಾಗುತ್ತದೆ. ಸಿನಿಮಾ ಕೆಲವೊಮ್ಮೆ ನಿಧಾನವಾಗಿ ಸಾಗುತ್ತಿದೆ ಅನಿಸಿದರೆ ಕೆಲವೊಂದು ಚಿತ್ರಗಳು ಮಜಾ ಕೊಡುತ್ತದೆ.
ಆಂಟೋನಿ ದಾಸ್ ಹಾಗೂ ಸತ್ಯ ಇಬ್ಬರು, ಪಾರ್ಥಿಬನ್ ಹಿನ್ನೆಲೆ ತಿಳಿಯುವ ಪ್ರಯತ್ನಕ್ಕೆ ಕೈ ಹಾಕುವುದರೊಂದಿಗೆ ಚಿತ್ರದ ಸೆಕೆಂಡ್ ಹಾಫ್ ಆರಂಭವಾಗುತ್ತದೆ. ಫಸ್ಟ್ ಹಾಫ್ ನಲ್ಲಿ ಚಿತ್ರ ಅಬ್ಬರಿಸಿದರೆ ಸೆಕೆಂಡ್ ಹಾಫ್ ನಲ್ಲಿ ಡಲ್ ಅನಿಸುತ್ತದೆ. ಸಂಜಯ್ ದತ್ , ಅರ್ಜುನ್ ಸರ್ಜಾರಂತಹ ಮಹಾನ್ ನಟರ ಪಾತ್ರಗಳು ಕೂಡ ಸದ್ದು ಮಾಡಲ್ಲ. ಲಿಯೋ ಹೊಸ ಕಥೆಯಲ್ಲದಿದ್ದರೂ ಚಿತ್ರದ ನಿರ್ದೇಶಕರು ಹಳೆ ಕಥೆಯನ್ನು ಹೊಸತನದಿಂದ ತೆರೆಮೇಲೆ ತರಲು ಯತ್ನಿಸಿದ್ದಾರೆ.
ಇನ್ನೂ ಆಕ್ಟಿಂಗ್ ವಿಚಾರಕ್ಕೆ ಬಂದರೆ ಇಡೀ ಚಿತ್ರವನ್ನು ಸಾಗಿಸಿರೋದು ದಳಪತಿ ವಿಜಯ್. ಆಕ್ಷನ್ ಸನ್ನಿವೇಶಗಳಂತೂ ವಿಜಯ್ ಅಭಿಮಾನಿಗಳಿಗೆ ರಸದೌತಣ ಉಣಬಡಿಸಿದೆ. ಸಂಜಯ್ ದತ್, ಅರ್ಜುನ್ ಸರ್ಜಾ ಪಾತ್ರಗಳು ಅಷ್ಟೇನೂ ನಿರೀಕ್ಷಿತ ಮಟ್ಟದಲ್ಲಿ ಮಜಾಕೊಡುತ್ತಿಲ್ಲ. ತ್ರಿಶಾ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ