ಯಾರೂ ಈ ರಚಿನ್ ರವೀಂದ್ರ? ನ್ಯೂಜಿಲ್ಯಾಂಡ್ ನ ಈ ಹೊಸ ಪ್ರತಿಭೆಗೂ ಕರ್ನಾಟಕಕ್ಕೂ ಏನು ಸಂಬಂಧ?

 ಅಂತರಾಷ್ಟ್ರೀಯ ಕ್ರಿಕೆಟ್ ಸಮುದಾಯಕ್ಕೆ ರಚಿನ್ ರವೀಂದ್ರ ಯಾರೆಂದು ತಿಳಿದಿಲ್ಲದಿದ್ದರೆ, ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಆರಂಭಿಕ ಪಂದ್ಯದ ನಂತರ ಅವರು ಈಗ ಆಲ್ ರೌಂಡರ್ ಅಗಿ  ಪರಿಚಿತರಾಗಿದ್ದಾರೆ, ಇದೀಗ ಅವರು ವಿಶ್ವಕಪ್ ಶತಕ ಬಾರಿಸಿದ ಅತ್ಯಂತ ಕಿರಿಯ ನ್ಯೂಜಿಲೆಂಡ್ ಬ್ಯಾಟರ್ ಎನಿಸಿಕೊಂಡಿದ್ದಾರೆ


ಗುರುವಾರ ನಡೆದ ಕ್ರಿಕೆಟ್ ಟೂರ್ನಮೆಂಟ್‌ನ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್‌ನ ಒಂಬತ್ತು ವಿಕೆಟ್‌ಗಳ ಗೆಲುವಿನ ಎರಡೂ ಇನ್ನಿಂಗ್ಸ್‌ಗಳಲ್ಲಿ ರವೀಂದ್ರ ಮಹತ್ವದ ಪಾತ್ರ ವಹಿಸಿ ದೊಡ್ಡ ಸಾಧನೆ ಮಾಡಿದ್ದಾರೆ. 

ಕೇನ್ ವಿಲಿಯಮ್ಸನ್ ಇನ್ನೂ ACL ಗಾಯದಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಮತ್ತು ಲಾಕಿ ಫರ್ಗುಸನ್ ಕೊನೆ ಕ್ಷಣದಲ್ಲಿ ತಿಣುಕಾಡುತ್ತಿದ್ದ ಸಂದರ್ಭದಲ್ಲಿ ನ್ಯೂಜಿಲೆಂಡ್ 23 ವರ್ಷದ ರವೀಂದ್ರ ಅವರನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯಕ್ಕೆ ಸೇರಿಸಿಕೊಂಡರು.


ರವೀಂದ್ರ ಅವರು ಚೊಚ್ಚಲ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡಿ ಶತಕ ಸಿಡಿಸುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದರು.

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರವೀಂದ್ರ ಅವರು 128.12 ಸ್ಟ್ರೈಕ್ ರೇಟ್‌ನಲ್ಲಿ 96 ಎಸೆತಗಳಲ್ಲಿ 123 ರನ್ ಗಳಿಸಿ ಅಜೇಯರಾಗಿ ಐದು ಸಿಕ್ಸರ್ ಮತ್ತು 11 ಬೌಂಡರಿಗಳನ್ನು ಹೊಡೆದರು. 

23 ವರ್ಷದ ಅವರು ವಿಶ್ವಕಪ್ ಚೊಚ್ಚಲ ಶತಕವನ್ನು ಗಳಿಸಿದ ಮೂರನೇ ಕಿರಿಯ ಬ್ಯಾಟ್ಸ್ ಮನ್ ಆಗಿದ್ದಾರೆ.


ರವೀಂದ್ರ ಅವರು ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪೂರ್ಣ 10 ಓವರ್‌ಗಳನ್ನು ಬೌಲ್ ಮಾಡಿದರು ಮತ್ತು ಹ್ಯಾರಿ ಬ್ರೂಕ್ ಅವರ ನಿರ್ಣಾಯಕ ವಿಕೆಟ್ ಪಡೆದರು, 


ಯಾರೂ ಈ ರವೀಂದ್ರ



ಕಿವೀಸ್ ಕ್ರಿಕೆಟಿಗ ಭಾರತದಲ್ಲಿ ತನ್ನ ಮೊದಲ ODI ಶತಕವನ್ನು ಗಳಿಸಿದ್ದಕ್ಕೂ ಅವರ ಹೆಸರಿಗೂ ಸಾರ್ಥಕತೆ ಇದೆ. ಅಂದಹಾಗೆ . ರವೀಂದ್ರ ಅವರ ಭಾರತೀಯ ಮೂಲದವರು. ಅವರ ತಂದೆ ರವಿ ಕೃಷ್ಣಮೂರ್ತಿ ಮತ್ತು ತಾಯಿ ದೀಪಾ ಕೃಷ್ಣಮೂರ್ತಿ, 1990 ರ ದಶಕದಲ್ಲಿ ಬೆಂಗಳೂರಿನಿಂದ ವೆಲ್ಲಿಂಗ್ಟನ್‌ಗೆ ತೆರಳಿದರು

ರವೀಂದ್ರರ ತಂದೆ  ಕ್ಲಬ್ ನ ಮಾಜಿ ಆಟಗಾರ ಮತ್ತು ಕ್ರಿಕೆಟ್ ಉತ್ಸಾಹಿ. ಅವರು ವೆಲ್ಲಿಂಗ್ಟನ್‌ನಲ್ಲಿ 18 ನವೆಂಬರ್ 1999 ರಂದು ಜನಿಸಿದ ತಮ್ಮ ಮಗನಿಗೆ ಇಬ್ಬರು ಪ್ರಸಿದ್ಧ ಭಾರತೀಯ ಕ್ರಿಕೇಟಿಗರ ಹೆಸರನ್ನೇ ಇಟ್ಟಿದ್ದಾರೆ. ರವೀಂದ್ರ ಅವರ ಹೆಸರು, ರಚಿನ್, ಇಬ್ಬರು ಭಾರತೀಯ ಶ್ರೇಷ್ಠರಾದ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರನ್ನು ಸೇರಿಸಿ ಇಟ್ಟಿರುವ ಹೆಸರಿದು. 

ಸಂದರ್ಶನವೊಂದರಲ್ಲಿ ಮಾತನಾಡಿದ್ದ ರವೀಂದ್ರ,  ಅಮ್ಮ ಮತ್ತು ಅಪ್ಪ ಇಬ್ಬರಿಗೂ ಸಚಿನ್ ಹಾಗೂ ರಾಹುಲ್ ತುಂಬಾನೆ ಇಷ್ಟ. ಹೀಗಾಗಿ ಅವರು ನಿರ್ಧರಿಸಿ ರಚಿನ್ ಎಂದು ಹೆಸರಿಟ್ಟಿದ್ದರು. ರ ಎಂಬುದು ರಾಹುಲ್ ಇಂದ ಹಾಗೂ ಚಿನ್ ಎಂಬುದು ಸಚಿನ್ ಅವರ ಹೆಸರಿಂದ ತೆಗೆದಿದ್ದು  ಎಂದವರು ಹೇಳಿದ್ದರು. 

 

ರವೀಂದ್ರ ಅವರು ನ್ಯೂಜಿಲೆಂಡ್‌ನ ಅಂಡರ್ -19 ತಂಡ ಮತ್ತು ಅವರ "ಎ" ತಂಡಕ್ಕಾಗಿ ಆಡಿದ್ದರಿಂದ ಅವರ ಪ್ರತಿಭೆಯನ್ನು ಚಿಕ್ಕ ವಯಸ್ಸಿನಲ್ಲಿಯೇ ಗುರುತಿಸಲಾಯಿತು.



ಅವರು 2016 ರಲ್ಲಿ ಅಂಡರ್-19 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಅನ್ನು ಪ್ರತಿನಿಧಿಸಿದರು. ನ್ಯೂಜಿಲೆಂಡ್‌ನಲ್ಲಿ ನಡೆದ ಪಂದ್ಯಾವಳಿಯ 2018 ಆವೃತ್ತಿಯಲ್ಲಿಯೂ ರವೀಂದ್ರ ಆಡಿದರು ಮತ್ತು ಕೀನ್ಯಾ ವಿರುದ್ಧ 117 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 76 ರನ್ ಗಳಿಸಿದರು. 

2021 ರಲ್ಲಿ, ರವೀಂದ್ರ ಅವರು ಬಾಂಗ್ಲಾದೇಶದ ವಿರುದ್ಧ ಮಿರ್‌ಪುರದಲ್ಲಿ ತಮ್ಮ T20I ಚೊಚ್ಚಲ ಪಂದ್ಯವನ್ನು ಆಡಿದರು, 

ಅದರ ನಂತರ ಶೀಘ್ರದಲ್ಲೇ, ರವೀಂದ್ರ ಬ್ಲ್ಯಾಕ್ ಕ್ಯಾಪ್ಸ್‌ಗಾಗಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು ಮತ್ತು ಅವರ ಮೊದಲ ಟೆಸ್ಟ್ ಭಾರತದಲ್ಲೇ ಇದ್ದಿದ್ದು ಕುತೂಹಲಕಾರಿಯಾಗಿತ್ತು. ರವೀಂದ್ರ ಅವರ ತಂದೆಯ ಕುಟುಂಬಸ್ಥರು ಬೆಂಗಳೂರಿನ ಜಯನಗರದಲ್ಲಿ ವಾಸಿಸುತ್ತಿದ್ದಾರೆ. 2023ರ ಆರಂಭದಲ್ಲಿ, ರವೀಂದ್ರ ಅಂತಿಮವಾಗಿ ನ್ಯೂಜಿಲೆಂಡ್‌ನ ODI ಸೆಟಪ್‌ಗೆ ಪ್ರವೇಶಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ, ರವೀಂದ್ರ ನ್ಯೂಜಿಲೆಂಡ್ ಪರ ಮೂರು ಟೆಸ್ಟ್‌ಗಳಲ್ಲಿ 73 ರನ್, 13 ODIಗಳಲ್ಲಿ 312 ರನ್ ಮತ್ತು 18 T20I ಗಳಲ್ಲಿ 145 ರನ್ ಗಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?