ಶ್ರೀದೇವಿಯ ಆ ಚಿತ್ರಕ್ಕೆ ಬಂಡವಾಳ ಹೂಡಲು ನಿರ್ಪಾಕರು ಹಿಂದೇಟು ಹಾಕಿದ್ಯಾಕೆ ಗೊತ್ತಾ?

 ಬಾಲಿವುಡ್ ನ ದಿ. ನಟಿ ಶ್ರೀದೇವಿ. ಇಹಲೋಕ ತ್ಯಜಿಸಿ 5 ವರ್ಷಗಳು ಕಳೆದರೂ ಇಂದಿಗೂ ಆಕೆಯ ಬಗ್ಗೆ ಆಕೆಯ ಅಭಿಮಾನಿಗಳಲ್ಲಿ ಮಾತ್ರ ಸಾವಿರ ಪ್ರಶ್ನೆ. ಅದೇ ಪ್ರೀತಿ. 



ಈ ನಡುವೆ ಶ್ರೀದೇವಿಯವರ ಸಿಕ್ಕಾಪಟ್ಟೆ ಹಿಟ್ ಆದ ಆ ಒಂದು ಸಿನಿಮಾವನ್ನು ನಿರ್ಮಾಣ ಮಾಡಲು ನಿರ್ಮಾಪಕರು ಹಿಂದೆ ಮುಂದೆ ನೋಡಿದ್ದರಂತೆ. ಮಹಿಳಾ ಪ್ರಧಾನ ಚಿತ್ರ ಮಾಡಿದರೆ ಯಾರೂ ಚಿತ್ರಮಂದಿರಕ್ಕೆ ಹೋಗುತ್ತಾರೆ. ಎಂದು ನಿರ್ಮಾಪಕರು ಮೂಗಿಮುರಿದಿದ್ದರಂತೆ. ಆದರೆ ಕೊನೆಗೆ ಆ ಚಿತ್ರ ಸೂಪರ್ ಹಿಟ್ ಆಗಿದ್ದು ಮಾತ್ರವಲ್ಲ. ಮಹಿಳಾ ಪ್ರಧಾನ ಚಿತ್ರವನ್ನು ಜನ ಪ್ರೀತಿಸುತ್ತಾರೆ ಎಂಬುದು ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಪ್ರೂ ಆಗಿತ್ತು. 

2012ರಲ್ಲಿ ರಿಲೀಸ್ ಆದ ಬಾಲ್ಕಿ ಶಿಂಧೆ ನಿರ್ದೇಶನದ ಇಂಗ್ಲೀಷ್ -ವಿಂಗ್ಲೀಷ್ ಚಿತ್ರದಲ್ಲಿ ಶ್ರೀದೇವಿ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದರು. ಪತಿಯ ಅಹಂ, ಇಂಗ್ಲೀಷ್ ಬಾರದ ಮಡದಿ( ಶ್ರೀದೇವಿ) ಗಂಡನ ಅಸಡ್ಡೆಯ ಮಾತುಗಳನ್ನು ಸಹಿಸಿ ಸಹಿಸಿ ಸಾಕಾಗಿದ್ದ ಮಡದಿ, ವಿದೇಶಕ್ಕೆ ಹೋಗುವ ಸಂದರ್ಭಧಲ್ಲಿ. ಇಂಗ್ಲೀಷ್ ಬಾರದ ನೀನು ಅಲ್ಲಿಹೋಗಿ ಮಾಡೋದೇನು ಎನ್ನುವ ಪತಿಯ ನಿರ್ಲಕ್ಷ್ಯದ ಮಾತು. ಹೀಗೆ ಹೃದಯ ಸ್ಪರ್ಶಿ ಸನ್ನಿವೇಶಗಳು , ಮಹಿಳಾ ಪ್ರಧಾನ ಪಾತ್ರವನ್ನಿಟ್ಟುಕೊಂಡಿದ ಚಿತ್ರಕ್ಕೆ ಪ್ರೇಕ್ಷಕರು ಉತ್ಯುತ್ತವಾದ ಪ್ರತಿಕ್ರಿಯೆಯನ್ನು ಕೂಡ ಕೊಟ್ಟಿದ್ದರು. ಆದರೆ ಈ ಚಿತ್ರ ಆರಂಭದಲ್ಲಿ ಸಾಕಷ್ಟು ಚಾಲೆಂಜ್ ಗಳನ್ನು ಎದುರಿಸಿತ್ತು ಎಂದು ಬಾಲ್ಕಿ ಹೇಳಿಕೊಂಡಿದ್ದಾರೆ. 

ಈ ಕುರಿತಂತೆ ಮಾತನಾಡಿರುವ ಇಂಗ್ಲೀಷ್ ವಿಂಗ್ಲೀಷ್ ನಿರ್ದೇಶಕ ಬಾಲ್ಕಿ, ಚಿತ್ರ ಸೂಪರ್ ಹಿಟ್ ಆಗಿದ್ದು ಹಿಸ್ಟರಿ. ಆದರೆ ಆರಂಭದಲ್ಲಿ  ಇದಕ್ಕೆ ನಿರ್ದೇಶಕರು ಸಿಗದೆ, ಚಿತ್ರತಂಡ ಪರದಾಡಿತ್ತು. 

ಈ ಚಿತ್ರ ಮತ್ತೊಂದು ವಿಶೇಷ ಎಂದರೆ, 15 ವರ್ಷಗಳ ನಂತರ ಕಮ್ ಬ್ಯಾಕ್ ಮಾಡಿದ್ದ ಚಿತ್ರವೂ ಇದೇ ಆಗಿತ್ತು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?