ಅಪ್ಪು ಸಿನಿಮಾದ ಕಲೆಕ್ಷನ್ ಕುರಿತಂತೆ ಮಾತನಾಡಿದ ಶಿವಣ್ಣ ಹೇಳಿದ್ದೇನು?

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಶಿವಣ್ಣ ಚಿತ್ರಗಳು ಹೇಗಿರಬೇಕು ಎಂಬುದರ ಕುರಿತಂತೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.


 

ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ, ಚಿತ್ರತಂಡವಿರಲಿ ಯಾರೆ ಆಗಲಿ ಇತ್ತೀಚಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಇಷ್ಟಾಗಬಹುದು ಅಷ್ಟಾಗಬಹುದು ಎಂದು ಲೆಕ್ಕಾಚಾರ ಹಾಕಿ ಸಿನಿಮಾ ಮಾಡೋದು ಸಾಮಾನ್ಯ. ಆದರೆ ಇದಕ್ಕೆ ನೋ ಅಂದಿರುವ ನಟ ಶಿವಣ್ಣ, ಕಲೆಕ್ಷನ್ ಟಾರ್ಗೆಟ್ ಇಟ್ಟುಕೊಂಡು ಯಾವುದೇ ಸಿನಿಮಾ ಮಾಡಬಾರದು. ಒಂದು ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಟಾರ್ಗೆಟ್ ಅಷ್ಟೇ ಇರಬೇಕು, ಆಗ ಅಟೋಮ್ಯಾಟಿಕ್ ಆಗಿ ಕಲೆಕ್ಷನ್ ಆಗುತ್ತೆ. ಅದು ಬಿಟ್ಟು ಕಲೆಕ್ಷನ್ ಲೆಕ್ಕಾಚಾರ ಮಾಡುತ್ತಾ ಹೋದರೆ, ಒಳ್ಳೆಯ ಸಿನಿಮಾವನ್ನು ಕೊಡೋಕ್ಕೆ ಆಗಲ್ಲಾ. ಕಲೆಕ್ಷನ್ ಕೂಡ ಆಗಲ್ಲ. ಒಳ್ಳೆ ಸಿನಿಮಾ ಕೊಟ್ಟಾಗ ಜನ ನೋಡ್ತಾರೆ, ಕಲೆಕ್ಷನ್ ಕೂಡ ಆಗುತ್ತೆ ಎಂದಿದ್ದಾರೆ ಶಿವಣ್ಣ.

ನಾವು ಇವತ್ತು ಇರ್ತೀವಿ. ನಾಳೆ? ಗೊತ್ತಿಲ್ಲ. ಹೀಗಾಗಿ ಎಲ್ಲದಕ್ಕೂ ದೇವರಿಗೆ ಥ್ಯಾಂಕ್ಯೂ ಹೇಳಬೇಕು ಹೊರತು ಟಾರ್ಗೆಟ್ ಇಟ್ಟುಕೊ ಬಾರದು. ಸಾವಿರ ಕೋಟಿ ರೂಪಾಯಿ ಟಾರ್ಗೆಟ್ ಇಟ್ಟುಕೊಂಡರೆ ಅದು ಆಗುತ್ತಾ ಇಲ್ವಾ ಗೊತ್ತಿಲ್ಲಾ. ಆಗಬೇಕು ಅಂತ ಹಣೆಬರಹದಲ್ಲಿ ಬರೆದಿದ್ದರೆ ಆಗೆ ಆಗುತ್ತೆ. ಅದನ್ನು ತಡೆಯಲು ಸಾಧ್ಯವಿಲ್ಲ.  

ಬ್ಯುಸಿನೆಸ್ ಆಗಬೇಕು ಅಂತ ಸಿನಿಮಾ ಮಾಡಬೇಡಿ. ಒಳ್ಳೆ ಸಿನಿಮಾ ಮಾಡಬೇಕು ಅಂತ ಮಾಡಿ, ಖಂಡಿತವಾಗಿಯೂ ಕಲೆಕ್ಷನ್ ಆಗಿಯೇ ಆಗುತ್ತೆ.ಜನ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಪಾತ್ರವನ್ನು ಮಾಡಿ. ಇವತ್ತಿನ ದಿನಗಳಲ್ಲಿ ಒಂದು ಬಂಗಾರದ ಮನುಷ್ಯ ಸಿನಿಮಾ ತೋರಿಸಿಬಿಡಿ ನೋಡೋಣ. ಆ ಚಿತ್ರವನ್ನು ಎಲ್ಲರೂ ಇಂದಿಗೂ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಕಾರಣ ಆ ಚಿತ್ರದ ಪಾತ್ರ. ಜನರ ಮನಸ್ಸಿನಲ್ಲಿ ಉಳಿಯುವುದು ಪಾತ್ರ.  ಈಗ ಪುನೀತ್ ವಿಚಾರವನ್ನೇ ತೆಗೆದುಕೊಳ್ಳೋಣ. ಆತನ ಸಿನಿಮಾಗಳು ಎಷ್ಟು ಕೋಟಿ ಮಾಡಿವೆ. ಎಷ್ಟು ಕಲೆಕ್ಷನ್ ಆಗಬೇಕೋ ಅಷ್ಟೇ ಆಗಿರೋದು. ಆದರೆ ಆತನ ನಡತೆ, ಗುಣ, ಮನುಷ್ಯತ್ವ, ಇಡೀ ವಿಶ್ವವನ್ನೇ ರೀಚ್ ಆಗಿದೆ.ಹೀಗಾಗಿ ಒಳ್ಳೆ ಸಿನಿಮಾ ಮಾಡಬೇಕು. ಜನರಿಗೆ ರೀಚ್ ಆಗಬೇಕು ಅಂತ ಮಾತ್ರ ಸಿನಿಮಾ ಮಾಡಬೇಕು ಎಂದವರು ಹೇಳಿದ್ದಾರೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?