ಅಕ್ಟೋಬರ್ 14ರ ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ?

 2023ರ ಅಕ್ಟೋಬರ್ ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ.  ಭಾರತದಲ್ಲಿ ರಿಂಗ್ ಆಫ್ ಪೈರ್ ಗೋಚರಿಸುತ್ತದೆಯೇ ?



2023ರ ಅಕ್ಟೋಬರ್ 14 ಖಗೋಳ ಪ್ರಿಯರಿಗೊಂದು ಕೌತುಕದ ವಿಚಾರ. ಈ ವರ್ಷದ ಸೂರ್ಯಗ್ರಹಣಕ್ಕೆ ನಾಳೆ ಗಗನವೂ ಸಾಕ್ಷಿಯಾಗಲಿದ್ದು, ಖಗೋಳ ಪ್ರಿಯರು ಈ ಕೌತುಕವನ್ನು ವೀಕ್ಷಿಸಲು ರೋಮಾಂಚಿತರಾಗಿದ್ದಾರೆ. ರಿಂಗ್ ಆಫ್ ಪೈರ್ ಎಂದು ಕರೆಯಲ್ಪಡುವ ಸೌರ ಗ್ರಹಣವು  . ನಾಳೆ ಅಕ್ಟೋಬರ್ 14 ರಂದು ವಾರ್ಷಿಕ ಸೂರ್ಯಗ್ರಹಣವು ಶನಿವಾರ ನಡೆಯಲಿರುವುದರಿಂದ ಆಕಾಶ ವೀಕ್ಷಕರು ಆಕಾಶದಲ್ಲಿ ರೋಮಾಂಚಕ ಅನುಭವಕ್ಕೆ ಸಾಕ್ಷಿಯಾಗಲಿದ್ದಾರೆ. 'ರಿಂಗ್ ಆಫ್ ಫೈರ್' ಎಂದೂ ಕರೆಯಲ್ಪಡುವ ಸೌರ ಗ್ರಹಣವು ಅಮೆರಿಕಾದ ಬಹುತೇಕ ನಗರಗಳಲ್ಲಿ ಗೋಚರಿಸಲಿದೆ. 

ಈ ಗ್ರಹಣವನ್ನು ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತದೆ. ಕಾರಣ ಇದು ಸೂರ್ಯನ ವಿಶಿಷ್ಠ ಆಕಾರದಲ್ಲಿ ಸುತ್ತುವರೆಯಲಿದ್ದು, ಚಂದ್ರನು ಬಹುತೇಕ ಸೂರ್ಯನ ಭಾಗವನ್ನು ಕವರ್ ಮಾಡುವುದರಿಂದಸೂರ್ಯನ ರಿಂಗ್ ನಂತೆ ಕಂಗೊಳಿಸಲಿದ್ದಾನೆ.  ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಚಲಿಸಿದಾಗ ಮತ್ತು ಸೂರ್ಯನು ಭಾಗಶಃ ಮರೆಯಾಗುವುದರಿಂದ ಉಂಗುರುದ ಆಕಾರದಲ್ಲಿ ಸೂರ್ಯನ ಗೋಚರಿಸಲಿದ್ದಾನೆ.

ಚಂದ್ರನ ಆಕಾರವು ಸೂರ್ಯನಿಗಿಂತ ಚಿಕ್ಕದಾಗಿರುವುದರಿಂದ, ಸೂರ್ಯನು ಉಂಗುರದಂತೆ ಕಂಗೊಳಿಸಲಿದ್ದಾನೆ.

ರಿಂಗ್ ಆಫ್ ಫೈರ್ ದಿನಾಂಕ ಮತ್ತು ಸಮಯ

ಸೂರ್ಯಗ್ರಹಣವು ನಾಳೆ, ಶನಿವಾರ, ಅಕ್ಟೋಬರ್ 14, 2023 ರಂದು ಸಂಭವಿಸುತ್ತದೆ, ಚಂದ್ರನು ಭೂಮಿಯಿಂದ ತನ್ನ ಅತ್ಯಂತ ದೂರದಲ್ಲಿರುವ ಅಪೋಜಿಯನ್ನು ತಲುಪಿದ ಕೇವಲ 4.6 ದಿನಗಳ ನಂತರ ಸಂಭವಿಸುತ್ತದೆ. ಬೆಳಗ್ಗೆ 9.13ಕ್ಕೆ ಆರಂಭವಾಗುವ ಇದು, ಟೆಕ್ಸಾಸ್ ನಲ್ಲಿ ಮದ್ಯಾಹ್ನಾ 12.03ಕ್ಕೆ ಕೊನೆಗೊಳ್ಳಲಿದೆ ಎಂದು ನಾಸಾ ತಿಳಿಸಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅವಕಾಶಗಳನ್ನು ಪಡೆಯಲು ನಟಿ ಜ್ಯೋತಿಕಾ ಈ ರೀತಿಯೂ ಮಾಡಿದ್ದಾರಂತೆ...|

ಲಾಕ್ ಡೌನ್ ಲವ್ ಸ್ಟೋರಿಗೆ ಮದುವೆಯ ಬ್ರೇಕ್. ಅಮೀರ್ ಖಾನ್ ಮಗಳು ಹಿರಾ ಲವ್ ಸ್ಟೋರಿ