ಶಿಖರ್ ದವನ್ ಪತ್ನಿ ತೋರಿದ ಕ್ರೌರ್ಯವಾದರೂ ಏನು?

ಶಿಖರ್ ಜೊತೆಗೆ ಎರಡನೇ ಮದುವೆ, ಮೊದಲ ಗಂಡನ ಮಗುವನ್ನೂ ಬಿಡುವಂತಿಲ್ಲ, ಶಿಖರ್ ಮಗನನ್ನು ತಂದೆಯ ಸುಪರ್ಧಿಗೆ ನೀಡಲು ಇಚ್ಚಿಸಲಿಲ್ಲ. ಹೀಗಾಗಿ ಶಿಖರ್ ಅನುಭವಿಸಿದ ಮಾನಸಿಕ ಯಾತನೆ ಅಷ್ಟಿಷ್ಟಲ್ಲ.  




ಕ್ರಿಕೇಟಿಗ ಶಿಖರ್ ದವನ್ ಬಾಳಿನ ಒಂದು ಅದ್ಯಾಯ ಅಂತ್ಯವಾಗಿದೆ. ಸುಮಾರು ವರ್ಷಗಳ ಕಾನೂನು ಹೋರಾಟದ ಬಳಿಕ ಇದೀಗ ಶಿಖರ್ ದವನ್ ಅವರಿಗೆ ಪತ್ನಿಯಿಂದ ವಿಚ್ಛೇದನ ಸಿಕ್ಕಿದೆ. 

ಅಕ್ಟೋಬರ್ 5, 2023ರಂದು ದೆಹಲಿ ಕೋರ್ಟ್ ಶಿಖರ್ ದವನ್ ಅವರಿಗೆ ವಿಚ್ಛೇದನ ನೀಡಿದೆ. ಶಿಖರ್ ದವನ್ ಅವರ ಪುತ್ರನನ್ನು ನೋಡಲು ಅವಕಾಶವನ್ನೂ ನೀಡದ ಅಯೆಶಾ ನನಗೆ ಮಾನಸಿಕವಾಗಿ ಕಿರಿಕಿರಿಯನ್ನುಂಟು ಮಾಡುತ್ತಿದ್ದಾಳೆ ಎಂದು ಶಿಖರ್ ದೂರಿದ್ದರು. ಇದೇ ಆದಾರದಲ್ಲಿ ಇದೀಗ ವಿಚ್ಛೇದನ ನೀಡಲಾಗಿದೆ. ಅಲ್ಲದೆ ಶಿಖರ್ ದವನ್ ಹಾಗೂ ಅವರ ಪತ್ನಿ 2020ರಿಂದ ಗಂಡ ಹೆಂಡತಿಯರಂತೆ ಒಟ್ಟಿಗೆ ಬಾಳುತ್ತಿಲ್ಲ ಎಂದು ದವನ್ ಪರ ವಕೀಲರು ವಾದಿಸಿದ್ದರು. 

ಅಯೆಶಾ ಮಾಡಿದ ಆರೋಪಗಳನ್ನು ಸಾಬೀತು ಪಡಿಸುವಲ್ಲಿ ಆಕೆ ವಿಫಲವಾದ ಕಾರಣ ದೆಹಲಿಯ ಕೌಟುಂಬಿಕ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಆದರೆ ಮಗ ಯಾರ ಕಸ್ಟಡಿಗೆ ಸೇರಬೇಕು ಎನ್ನುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಬದಲಿಗೆ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಶಿಖರ್ ದವನ್ ತನ್ನ ಮನನನ್ನು ಭೇಟಿ ಮಾಡಬಹುದು. ವಿಡಿಯೋ ಕಾಲ್ ಮತ್ತು ಸಂದೇಶಗಳ ಮೂಲಕ ಮಾತನಾಡಬಹುದು ಎಂಬ ಬಗ್ಗೆಯೂ ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

ಆಯೆಶಾಗೆ ಈಗಾಗಲೇ ಒಂದು ಮದುವೆಯಾಗಿದ್ದು, ಆತನಿಂದ ಆಕೆ ಹೆಣ್ಣು ಮಗುವನ್ನು ಪಡೆದಿದ್ದಳು. ಆ ಮಗುವಿನೊಂದಿಗೆ ಆಸ್ಟ್ರೇಲಿಯಾದಲ್ಲಿ ವಾಸವಿರುವ ಆಯೆಶಾ, ಶಿಖರ್ ಮಗನನ್ನು ಕೂಡ ಅಕೆಯೊಂದಿಗೆ ಇರಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಹಲವು ವರ್ಷಗಳಿಂದ ಮಗನಿಂದ ದೂರವೇ ಇರುವಂತೆ ಮಾಡಿದ್ದು ತಾನು ಅನುಭವಿಸಿರುವ ಮಾನಸಿಕ ಯಾತನೆಯನ್ನು ಗಮನಿಸಿ ನನಗೆ ನನ್ನ ಮಗನನ್ನು ಭೇಟಿ ಮಾಡುವ ಅವಕಾಶ ನೀಡಬೇಕು ಮತ್ತು ಆತನನ್ನು ನನ್ನ ಕಸ್ಟಡಿಗೆ ಕೊಡಬೇಕು ಎಂಬುದಾಗಿ ಶಿಖರ್ ಪರ ವಕೀಲರು ವಾದಿಸಿದ್ದರು. 

ಅಂದ ಹಾಗೆ ಆಯೆಶಾ ನನಗೂ ಭಾರತದಲ್ಲಿ ಶಿಖರ್ ಜೊತೆಗೆ ವಾಸಿಸಲು ಇಷ್ಟ. ಆದರೆ ನನ ಮೊದಲ ಮದುವೆಯಿಂದ ಪಡೆದಿರುವ ಮಗಳು ಆಸ್ಟ್ರೇಲಿಯಾದಲ್ಲಿದ್ದು ನಾನು ಭಾರತಕ್ಕೆ ಬಂದರೆ ಆಕೆಗೆ ತೊಂದರೆಯಾಗುತ್ತದೆ. ಹೀಗಾಗಿ ನಾನು ಆಸ್ಟ್ರೇಲಿಯಾದಲ್ಲಿ ಇರಬೇಕಾಗಿದ್ದು, ನನ್ನ ಬದ್ದತೆಯ ಬಗ್ಗೆ ಶಿಖರ್ ಗೂ ತಿಳಿದಿತ್ತು ಎಂದು ಆಯೆಶಾ ನ್ಯಾಯಾಲಯಕ್ಕೆ ತಿಳಿಸಿದ್ದರು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?