ನವರಾತ್ರಿ 6 ನೇ ದಿನ. ಮಾತೆ ದುರ್ಗೆಯ ಪೂಜಾ ವಿಧಾನ ಹೇಗಿರಬೇಕು..?

 ನವರಾತ್ರಿ 6 ನೇ ದಿನ ದುರ್ಗಾದೇವಿಯನ್ನು ಕಾತ್ಯಾಯಿನಿ ಸ್ವರೂಪಿಯಾಗಿ ಪೂಜಿಸಲಾಗುತ್ತದೆ. ದುರ್ಗಾ ದೇವಿಯ ಉಗ್ರ ಅವತಾರಗಳಲ್ಲಿ ಮಾ ಕಾತ್ಯಾಯಿನಿ ಕೂಡ ಒಬ್ಬಳು.  ರಾಕ್ಷಸರ ರಾಜ ಮಹಿಷಾಸುರನ ಮೇಲಿನ ವಿಜಯದಿಂದಾಗಿ ಆಕೆಯನ್ನು ಮಹಿಷಾಸುರಮರ್ಧಿನಿ ಎಂದು ಕರೆಯಲಾಗುತ್ತದೆ.



ಕತ್ಯಾಯಿನಿಯು ಸಿಂಹದ ಮೇಲೆ ಸವಾರಿ ಮಾಡುತ್ತಿರುವಂತೆ ಚಿತ್ರಿಸಲಾಗಿದೆ. ಅವಳ ಎಡಗಗೈಯಲ್ಲಿ ಕತ್ತಿ ಮತ್ತು ಕಮಲದ ಹೂವನ್ನು ಹಿಡಿದಿದ್ದರೆ,  ಬಲಗೈಯಲ್ಲಿ ಅಭಯ ಮತ್ತು ವರದ ಮುದ್ರೆಗಳನ್ನು ಪ್ರದರ್ಶಿಸುತ್ತದೆ. ಇದು ರಕ್ಷಣೆ ಮತ್ತು ಆಶೀರ್ವಾದದ ಸಂಕೇತವಾಗಿದೆ.

ಮಾ ಕಾತ್ಯಾಯಿನಿ ದುಷ್ಟ ಶಕ್ತಿಗಳನ್ನು ಸೋಲಿಸುವವಳು ಎಂಬ ನಂಬಿಕೆ.  ಮಾಕೆ ಕತ್ಯಾಯಿನಿ ಬೃಹಸ್ಪತಿಯನ್ನು ಆಳುತ್ತಾಳೆ.ಮತ್ತು ಬುದ್ದಿವಂತಿಕೆ ಮತ್ತು ಸಾಮರಸ್ಯದ ಗುಣಗಳನ್ನು ಒಳಗೊಂಡಿದ್ದಾಳೆ. ಕಾತ್ಯಾಯನಿ ದೇವಿಯ ದೈವಿಕ ಆಶೀರ್ವಾದವು ಭಕ್ತರನ್ನು ಅವರ ಪಾಪಗಳಿಂದ ಶುದ್ಧೀಕರಿಸುತ್ತದೆ, ದುಷ್ಟ ಶಕ್ತಿಗಳನ್ನು ದೂರ ಮಾಡುತ್ತದೆ ಮತ್ತು ಅಡೆತಡೆಗಳನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ.

ಅವಿವಾಹಿತ ಹುಡುಗಿಯರು ನವರಾತ್ರಿಯಲ್ಲಿ ಮಾ ಕಾತ್ಯಾಯಿನಿ ಪೂಜೆಯ ದಿನದಂದು ತಮ್ಮ ಇಷ್ಟದ ಸಂಗಾತಿ ಸಿಗಲೆಂದು ಪ್ರಾರ್ಥಿಸಿ ಉಪವಾಸ ಆಚರಿಸಿದರೆ ಅವರ ಆಸೆ ಈಡೇರುತ್ತದೆ ಎಂಬ ನಂಬಿಕೆಯಿದೆ

ನವರಾತ್ರಿಯ ಆರನೇ ದಿನದಂದು ಭಕ್ತರು ಬೇಗನೆ ಎದ್ದು  ಸ್ನಾನವನ್ನು ಮಾಡಿ, ಹೊಸ ಬಟ್ಟೆಯನ್ನು ಧರಿಸಿ ಪ್ರಾರ್ಥನ ಸ್ಥಳವನ್ನು ಶುಚಿಗೊಳಿಸಿ ದೇವಿಯನ್ನು ಹೂವುಗಳಿಂದ ಅಲಂಕರಿಸಿ ಪೂಜಿಸಿದರೆ ಅಪೇಕ್ಷಿತ ಫಲ ದೊರೆಯುತ್ತದೆ ಎನ್ನಲಾಗಿದೆ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಾಮಮಂದಿರದ ವಿಶೇಷತೆ ಕುರಿತಂತೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಅಕ್ಟೋಬರ್ 31, 1984ರ ಆ ಘಟನೆಯ ಬಳಿಕ ಇಂದಿರಾಗಾಂಧಿಯವರಲ್ಲಿ ಕಾಣಿಸಿಕೊಂಡಿತ್ತಂತೆ ಈ ವಿಚಿತ್ರ ಬದಲಾವಣೆ..!

ಅಜಿನೋಮೋಟೋ ಎಂದರೇನು? ದೇಹದ ಮೇಲೆ ಇದು ಬೀರುವ ಪರಿಣಾಮ ಹೇಗಿರುತ್ತೆ?