ರಚಿತಾ ರಾಮ್... ಬೆಂಗಳೂರಿನ ಈ ಬೆಡಗಿ ಬಬ್ಲಿ ಬಬ್ಲಿಯಾಗಿದ್ದುಕೊಂಡೆ ಕನ್ನಡದ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ ಎನಿಸಿಕೊಂಡವರು. 1991ರಲ್ಲಿ ಜನಿಸಿದ ಇವರ ಹೆಸರು ರಚಿತಾ ರಾಮ್. ಕಿರುತೆರೆ ಧಾರವಾಹಿಗಳ ಮೂಲಕ ಗಮನ ಸೆಳೆದ ರಚಿತಾ ರಾಮ್, 2013ರ ಬುಲ್ ಬುಲ್ ಸಿನಿಮಾದ ಮೂಲಕ ಹಿರಿತೆರೆಗೆ ಎಂಟ್ರಿಯಾಗುತ್ತಾರೆ. ಮೊದಲ ಸಿನಿಮಾವೇ ಸೂಪರ್ ಹಿಟ್ ಆಗಿದ್ದೇ ಆಗಿದ್ದು, ರಚಿತಾಗೆ ಸ್ಯಾಂಡಲ್ ವುಡ್ ನಲ್ಲಿ ಎಲ್ಲಿಲ್ಲದ ಬೇಡಿಕೆ ಬಂತು. 2015ರ ರನ್ನ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಇದು ಅವರ ಮೊದಲ ಫಿಲ್ಮ್ ಫೇರ್ ಪ್ರಶಸ್ತಿಯೂ ಹೌದು. 2016ರ ಚಕ್ರವ್ಯೂಹ, 2017ರ ಪುಷ್ಪಕವಿಮಾನ, ಭರ್ಜರಿ (2017), ನಟಸಾರ್ವಭೌಮ (2019), ಲವ್ ಯೂ ರಚ್ಚು (2021), ಮಾನ್ಸೂನ್ ರಾಗ (2022) ಮತ್ತು ಕ್ರಾಂತಿ (2023) ಮುಂತಾದ ಚಿತ್ರಗಳು ಅವರಿಗೆ ಒಳ್ಳೆಯ ನೇಮ್ ಆಂಡ್ ಫೇಮ್ ತಂದುಕೊಟ್ಟಿವೆ. ರನ್ನ, ಅಯೋಗ್ಯ (2018) ಮತ್ತು ಆಯುಷ್ಮಾನ್ ಭವ (2019) ಎಂಬ ಯಶಸ್ವಿ ಚಿತ್ರಗಳಿಗಾಗಿ ರಚಿತಾ ಅತ್ಯುತ್ತಮ ನಟನೆಗಾಗಿ ಮೂರು ಸೈಮಾ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ರಚಿತಾ ರಾಮ್ ಬಾಲ್ಯ ರಚಿತಾ ರಾಮ್ ಅವರ ತಂದೆಯ ಹೆಸರು ರಾಮ್. ಇವರು ಭರತನಾಣ್ಯ ಕಲಾವಿದರಾಗಿದ್ದು, ಇದುವರೆಗೂ ಹಲವು ಸಾರ್ವಜನಿಕ ಪ್ರದರ್ಶನಗಳನ್ನು ನೀಡಿದ್ದಾರೆ. ಹೀಗಾಗಿ ರಚಿತಾ ರಾಮ್ ಕೂಡ ಕ್ಲಾಸಿಕಲ್ ಭರತನಾಟ್ಯ ಕಲಾವಿದೆಯಾಗಿ